ವೀರಭದ್ರನಿಗೆ ಸಮಾನವಾಗಿ ಶಿವುವನ್ನು ಕೂರಿಸಿದ ಪಾರು; ಅಮ್ಮನ ಕೈಯ್ಯಲ್ಲೇ ಮಗನಿಗೆ ವಿಷ ಉಣಿಸುವ ಉಪಾಯ

ಅಮ್ಮನ ಕೈಯ್ಯಲ್ಲೇ ಮಗಿನಿಗೆ ವಿಷ ಉಣಿಸುವ ಉಪಾಯ
ಇನ್ನು ಶಿವು ತಾಯಿ ಮದುವೆ ಮನೆಗೆ ಬಂದರೂ ತಾನು ಬಂದಿದ್ದೇನೆ ಎಂದು ಅವಳು ಯಾರೊಂದಿಗೂ ಹೇಳಿಕೊಂಡಿಲ್ಲ. ಎಲ್ಲ ಖುಷಿಯಲ್ಲಿದ್ದಾರೆ, ನನ್ನಿಂದ ಮತ್ತೆ ಇವರು ತೊಂದರೆ ಅನುಭವಿಸುವುದು ಬೇಡ ಎಂದು ಅಂದುಕೊಳ್ಳುತ್ತಾಳೆ. ಆದರೆ, ಅಲ್ಲಿ ನಡೆಯುತ್ತಿರುವ ಪ್ರಮಾದಕ್ಕೆಲ್ಲ ತಾನೇ ಕಾರಣ ಆಗಬೇಕಾ? ಎಂಬ ಅನುಮಾನವೂ ಈಗ ಅವಳಲ್ಲಿ ಮೂಡಿದೆ. ಕಾರಣ, ಅವಳಿಗೆ ಹೇಳಿದ ಕೆಲಸ ಹಾಗಿತ್ತು. ಮದುವೆ ಮನೆಯಲ್ಲಿ ಅಡುಗೆ ಮಾಡುತ್ತ ಮುಖ ಮುಚ್ಚಿಕೊಂಡೇ ತಿರುಗುತ್ತಿರುವ ಅವಳ ಬಳಿ ಶಿವುಗೆ ವಿಷ ಉಣಿಸಲು ವೀರಭದ್ರನ ಮಗ ಹೇಳಿರುತ್ತಾನೆ. ಆದರೆ, ಅವಳಿಗೆ ತನ್ನ ಕೈಯ್ಯಾರೆ ತನ್ನ ಮಗನನ್ನು ಕೊಲ್ಲುವ ಯಾವ ಉದ್ದೇಶವೂ ಇರುವುದಿಲ್ಲ. ಹೇಗಾದರೂ ಮಾಡಿ ಅವನನ್ನು ಕಾಪಾಡಬೇಕು ಎಂದು ಅವಳು ಅಂದುಕೊಳ್ಳುತ್ತಾ ಇರುತ್ತಾಳೆ. ಆದರೆ ಅಷ್ಟರಲ್ಲಿ ವೀರಭದ್ರನ ಮಗ ಬಂದು ಇನ್ನೂ ಹೇಳಿದ ಕೆಲಸ ಆಗಿಲ್ವಾ? ಎಂದು ಪ್ರಶ್ನೆ ಮಾಡುತ್ತಾ.. ತಾನೇ ಅವಳ ಕೈಯ್ಯಲ್ಲಿದ್ದ ವಿಷದ ಬಾಟಲ್ ತೆಗೆದುಕೊಂಡು ಪಾಯಸಕ್ಕೆ ಸುರಿಯುತ್ತಾನೆ. ಅಡುಗೆಯವನು ಮೊದಲೇ ಬಂದು ಇದೆಲ್ಲವನ್ನು ಶಿವುಗೆ ರುಚಿ ನೋಡಲು ಕೊಡು ಎಂದು ಹೇಳಿರುತ್ತಾನೆ.