ಶನಿ ದೇವರು ಹೇಗೆ ಕಾಣಿಸಿದರೆ ಶುಭ ಮತ್ತು ಹೇಗೆ ಕಾಣಿಸಿದರೆ ಅಶುಭ

ನಾವು ನಿದ್ರಿಸುವಾಗ, ನಮಗೆ ಅನೇಕ ಕನಸುಗಳು ಬೀಳುತ್ತವೆ. ಅವುಗಳಲ್ಲಿ ಕೆಲವು ಕನಸುಗಳು ಮನಸ್ಸಿಗೆ ಸಂತೋಷ ನೀಡುವಂತಿದ್ದರೆ, ಇನ್ನು ಕೆಲವು ಕನಸುಗಳು ನಿದ್ದೆಯಿಂದ ಎಚ್ಚರಗೊಳ್ಳುವಂತೆ ಮಾಡಿ, ಭಯವನ್ನು ಹುಟ್ಟಿಸುತ್ತವೆ. ಪ್ರತಿ ಕನಸುಗಳ ಹಿಂದೆ ಏನಾದರೊಂದು ಸಂಕೇತವಿರುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಹಾಗೆ ಬೀಳುವ ಕೆಲವು ಕನಸುಗಳು ಒಳ್ಳೆಯ ಫಲಿತಾಂಶಗಳನ್ನು ನೀಡಬಹುದು. ಕೆಲವು ಕೆಟ್ಟ ಫಲಿತಾಂಶಗಳನ್ನು ನೀಡಬಹುದು. ಕೆಲವೊಮ್ಮೆ ಕಾಣವು ದುಃಸ್ವಪ್ನಗಳು ನಮ್ಮನ್ನು ಬಹಳ ಸಮಯದವರೆಗೆ ಕಾಡಲೂಬಹುದು. ಸ್ವಪ್ನ ಶಾಸ್ತ್ರದ ಪ್ರಕಾರ ನಾವು ಕಾಣುವ ಕನಸುಗಳ ಆಧಾರದ ಮೇಲೆ ಅದರ ಅರ್ಥವನ್ನು ಗ್ರಹಿಸಬಹುದಾಗಿದೆ. ಆ ಅರ್ಥಕ್ಕೆ ಅನುಗುಣವಾಗಿ ಪರಿಹಾರ, ಸಮಾಧಾನಗಳನ್ನು ಕಂಡುಕೊಳ್ಳಬಹುದಾಗಿದೆ. ಎಂದಾದರೂ ನಿಮ್ಮ ಕನಸಿನಲ್ಲಿ ಶನಿ ದೇವರನ್ನು ನೀವು ಕಂಡಿದ್ದೀರಾ? ನ್ಯಾಯದ ದೇವರು ಎಂದು ಕರೆಯುವ ಶನಿ ದೇವರು ಕನಸಿನಲ್ಲಿ ಬರುವುದರಿಂದ ಏನಾಗುತ್ತದೆ? ಅದು ಶುಭವೋ, ಅಶುಭವೋ? ಶನಿ ದೇವರು ಹೇಗೆ ಕಾಣಿಸಿದರೆ ಶುಭ ಮತ್ತು ಹೇಗೆ ಕಾಣಿಸಿದರೆ ಅಶುಭ? ಅದಕ್ಕೆ ಪರಿಹಾರವೇನು ಎಂಬುದನ್ನು ಇಂದು ತಿಳಿಯೋಣ.