Latest Kannada Nation & World
ಶುಭಾ ಪೂಂಜಾ ಸೇರಿದಂತೆ ನವ ಜೋಡಿಗೆ ಶುಭ ಹಾರೈಸಿದ ಸೆಲೆಬ್ರಿಟಿಗಳು

ನಂದಿನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಂಜು ಪಾವಗಡ
ಮಂಜು ಪಾವಗಡ ನಂದಿನಿ ಎಂಬುವರ ಕೈ ಹಿಡಿದಿದ್ದಾರೆ. ಅಪ್ಪ ಅಮ್ಮ ನೋಡಿದ ಹುಡುಗಿ ನಂದಿನಿ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರಂತೆ. ಮಂಜು ಹಾಗೂ ನಂದಿನಿ ಮದುವೆಗೆ ನಟಿ ಶುಭಾ ಪೂಜಾ, ಸುಷ್ಮಿತಾ, ಜಗ್ಗಪ್ಪ, ನಯನಾ ಶರತ್, ಮಜಾಭಾರತ ಖ್ಯಾತಿಯ ರೇಷ್ಮಾ ಸೇರಿದಂತೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಸೆಲೆಬ್ರಿಟಿಗಳು ಹಾಜರಾಗಿ ಹೊಸ ಜೋಡಿಗೆ ಶುಭ ಕೋರಿ ಬಂದಿದ್ದಾರೆ. ಮದುವೆ ವಿಡಿಯೋವನ್ನು ಶುಭ ಪೂಂಜಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಧಾರೆ ಎರೆದ ನಂತರ ಶುಭಾ ಪೂಂಜಾ, ಮಂಜು ಕೆನ್ನೆಗಳನ್ನು ಹಿಡಿದು ಗಿಲ್ಲುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಿರುತೆರೆ ವೀಕ್ಷಕರು ಕೂಡಾ ಮಂಜು ಹಾಗೂ ನಂದಿನಿಗೆ ಶುಭ ಕೋರುತ್ತಿದ್ದಾರೆ.