Latest Kannada Nation & World
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಮೇಶ್ ಇಂದಿರಾ ಬದಲು ಬೇರೊಬ್ಬರು ನಟಿಸಬೇಕಿತ್ತಂತೆ! ಲವ್ ಯು ಮನು ಅಂತ ಅಬ್ಬರಿಸಬೇಕಿದ್ದ ನಟ ಯಾರು?

ಭೈರತಿ ರಣಗಲ್ ಸಿನಿಮಾ ನವೆಂಬರ್ 15ರಂದು ಬಿಡುಗಡೆ
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಮನು ಮತ್ತು ಪ್ರಿಯಾ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದರು. ಸಪ್ತ ಸಾಗರದಾಎ ಎಲ್ಲೋ ಸಿನಿಮಾದಲ್ಲಿ ಇವರಿಬ್ಬರು ಪ್ರಮುಖ ಆಕರ್ಷಣೆ ಅನ್ನೋದು ಸುಳ್ಳಲ್ಲ. ಇದರ ಜತೆಗೆ ರಮೇಶ್ ಇಂದಿರಾ ನಟಿಸಿದ್ದ ಸೋಮಾ ಪಾತ್ರವೂ ಪವರ್‌ಫುಲ್ ಆಗಿತ್ತು. ನಟ, ನಿರ್ದೇಶಕ ರಮೇಶ್ ಇಂದಿರಾ ಈ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದರು. ಆದರೆ, ಆರಂಭದಲ್ಲಿ ಈ ಪಾತ್ರಕ್ಕ ರಮೇಶ್ ಇಂದಿರಾ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ ಎಂಬ ಆಸಕ್ತಿದಾಯಕ ಅಂಶವನ್ನು ನಿರ್ದೇಶಕ ಹೇಮಂತ್‌ರಾವ್ ಹೇಳಿದ್ದಾರೆ. ನವೆಂಬರ್ 15ರಂದು ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ. ಶಿವಣ್ಣನ ಜತೆ ಭೈರವನ ಕೊನೆ ಪಾಠ ಎಂಬ ಸಿನಿಮಾವನ್ನು ಹೇಮಂತ್ ರಾವ್ ಮಾಡುತ್ತಿದ್ದಾರೆ. ಹೀಗಾಗಿ, ಸೋಷಿಯಲ್ ಮೀಡಿಯಾ ಸಂವಾದದಲ್ಲಿ ಹೇಮಂತ್ ಕೂಡ ಭಾಗವಹಿಸಿದ್ದರು.