Latest Kannada Nation & World
ಸಿರಿಯಾ ಸರ್ಕಾರ ಪತನ, ನಾಗರಿಕ ದಂಗೆ ಯಶಸ್ಸು; ಬಶರ್ ಅಸಾದ್ ಕುಟುಂಬದ 50 ವರ್ಷಗಳ ಆಡಳಿತಕ್ಕೆ ತೆರೆ

ಅಸ್ಸಾದ್‌ನ ನಿರ್ಗಮನದ ನಂತರ, ಸಿರಿಯನ್ನರು ಅವನ ದಬ್ಬಾಳಿಕೆಯ ಆಳ್ವಿಕೆಯ ಅಂತ್ಯವನ್ನು ಆಚರಿಸಿದರು. ‘ನನ್ನ ಸಹೋದರರೇ, ಈ ಗೆಲುವು ಐತಿಹಾಸಿಕವಾಗಿದೆ‘ಎಂದು ಎಚ್‌ಟಿಎಸ್ ಮುಖ್ಯಸ್ಥ ಅಲ್-ಜುಲಾನಿ ಡಮಾಸ್ಕಸ್‌ನ ಹೆಗ್ಗುರುತಾಗಿರುವ ಉಮಯ್ಯದ್ ಮಸೀದಿಯಲ್ಲಿ ಭಾಷಣ ಮಾಡಿದರು. ಸಂಭ್ರಮಾಚರಣೆಯ ಘೋಷಣೆಗಳು, ‘ಸಿರಿಯಾ ನಮ್ಮದು ಮತ್ತು ಅಸ್ಸಾದ್ ಕುಟುಂಬವಲ್ಲ‘ ‘ನಾವು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೇವೆ‘ ಮತ್ತು ‘ಸಿರಿಯಾಕ್ಕೆ ಹೊಸ ಯುಗದ ಆರಂಭ‘ ಎಂದೆಲ್ಲಾ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.