Latest Kannada Nation & World
ಸುಧಾ ಬಳಿ ಕಾಫಿ ಕೇಳಿದ ಅಪೇಕ್ಷಾಳಿಗೆ ಮುಖಭಂಗ, ದಿವಾನ್ ಮನೆಯಲ್ಲಿ ನಿಗೂಢ ಸಂಚಿನ ಕಾರ್ಮೋಡ

ಸುಧಾ ಕಾಫಿ ತರುತ್ತಾಳೆ. ಕಾಫಿ ಕುಡಿದು ಗೌತಮ್ ಖುಷಿ ಪಡುತ್ತಾರೆ. “ಇದು ಅದ್ಭುತ ಕಾಫಿ, ನಿಮಗೆ ಬಂಗಾರದ ಬಳೆ ಕೊಡಿಸಬೇಕು” ಎಂದು ಗೌತಮ್ ಹೇಳುತ್ತಾರೆ. ಆಗ ಸುಧಾ ಭೂಮಿಕಾಳಿಗೆ ಸಜ್ಜಪ್ಪದ ಕಥೆ ಹೇಳುತ್ತಾರೆ. “ಬಂಗಾರದ ಬೆಲೆ ಗೊತ್ತೇ ಇಲ್ಲ, ಕಬ್ಬಿಣದ ರೀತಿ ಕೊಡ್ತಿರಿ” ಎಂದು ಸುಧಾ ತಮಾಷೆಗೆ ಹೇಳುತ್ತಾಳೆ. ಅದಕ್ಕೆ ಭೂಮಿಕಾ “ಬಂಗಾರಕ್ಕೆ ಬೆಲೆ ಇಲ್ಲ ಎಂದಲ್ಲ, ನೀವು ಕೊಡುವ ಪ್ರೀತಿ, ಕಾಳಜಿ, ಖುಷಿ ಅದಕ್ಕಿಂತಲೂ ಮೀರಿದ್ದು ಎಂದರ್ಥ” ಎನ್ನುತ್ತಾರೆ. ಇದೇ ಸಮಯದಲ್ಲಿ ಸುಧಾಳಿಗೆ ಕಾಲ್ ಬರುತ್ತದೆ. “ನಿನ್ನ ಮೇಲೆ ಎಲ್ಲರಿಗೂ ನಂಬಿಕೆ ಬರಬೇಕು. ಆ ರೀತಿ ನೀನು ನಡೆದುಕೊಳ್ಳಬೇಕು” ಎಂದು ಕರೆ ಮಾಡಿದ ವ್ಯಕ್ತಿ ಹೇಳುತ್ತಾರೆ. ಸುಧಾಳನ್ನು ಈ ಮನೆಗೆ ಕಳುಹಿಸಿದ ವ್ಯಕ್ತಿ ಯಾರು? ಗೌತಮ್ ಮನೆಯಲ್ಲಿ ನಿಗೂಢ ಸಂಚು ನಡೆಸಲು ಯಾರು ಯೋಜಿಸಿದ್ದಾರೆ. ಅದಕ್ಕೂ ಮೊದಲು ಗೌತಮ್ಗೆ ತನ್ನ ತಂಗಿ, ಅಮ್ಮನ ಪರಿಚಯವಾಗುತ್ತ? ಕಾದು ನೋಡಬೇಕಿದೆ.