Latest Kannada Nation & World
ಸ್ಯಾಂಡಲ್‌ವುಡ್ ನಟಿಯರ ವಾರ್ಷಿಕ ವರದಿ; ಮರ ಸುತ್ತುವುದಕ್ಕಷ್ಟೇ ಅಲ್ಲ, ಈ ವರ್ಷ ಗಮನ ಸೆಳೆದ ನಾಯಕಿಯರು ಇವರೇ
Sandalwood Leading Actresses: ಈ ವರ್ಷ ಕನ್ನಡ ಚಿತ್ರರಂಗಕದಲ್ಲಿ 220ಕ್ಕೂ ಹೆಚ್ಚು ಚಿತರಗಳು ಬಿಡುಗಡೆಯಾಗಿವೆ. ಈ ಪೈಕಿ ಬೆರಳಣಿಕೆಯಷ್ಟು ಚಿತ್ರಗಳು ಗಳಿಕೆ ಮಾಡಿದ್ದು ಬಿಟ್ಟರೆ, ಮಿಕ್ಕಂತೆ ಹೆಚ್ಚು ಯಶಸ್ಸುಗಳು ಸಿಗುವುದಿಲ್ಲ. ಅದರಲ್ಲೂ ಸ್ವಲ್ಪ ಗಳಿಕೆ ಮಾಡಿದ ಚಿತ್ರಗಳೆಲ್ಲವೂ ಸ್ಟಾರ್ ಚಿತ್ರಗಳೇ ಎಂಬುದು ಗಮನಾರ್ಹ. ಶಿವರಾಜಕುಮಾರ್, ಶ್ರೀಮುರಳಿ, ಗಣೇಶ್, ‘ದುನಿಯಾ’ ವಿಜಯ್ ತಮ್ಮ ಚಿತ್ರಗಳಿಂದ ಗಮನಸೆಳೆದರು. ಇನ್ನು, ನಾಯಕಿಯರು ವಿಷಯದ ಬಗ್ಗೆ ಹೇಳುವುದಾದರೆ, ಬಿಡುಗಡೆಯಾದ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರು. ನಾಯಕಿಯರೆಂದರೆ ಬರೀ ಮರ ಸುತ್ತವುದಕ್ಕಷ್ಟೇ ಸೀಮಿತ ಎಂಬ ಅಪವಾದದ ನಡುವೆಯೇ ಒಂದಿಷ್ಟು ನಟಿಯರು ಈ ವರ್ಷ ತಮ್ಮ ಅಭಿನಯ ಮತ್ತು ಚೆಲುವಿನಿಂದ ಗಮನಸೆಳೆದರು.