Latest Kannada Nation & World
ಮೋಕ್ಷಿತಾ ಹಾಗೂ ಉಗ್ರಂ ಮಂಜುಗೆ ಕಿಚ್ಚನ ಖಡಕ್ ಕ್ಲಾಸ್; ನಿಮ್ಮ ಯುದ್ಧ ನಿಮ್ಮದು ಮಾತ್ರ ಎಂದ ಸುದೀಪ್

ಆಗ “ಯಾಕೆ ಒಂದು ವಾರದಿಂದ ಆ ಮಾತು ನಿಮ್ಮಲ್ಲೇ ಉಳಿದುಕೊಂಡಿತ್ತು” ಎಂದು ಕಿಚ್ಚ ಕೇಳುತ್ತಾರೆ. ಆಗ ಮೋಕ್ಷಿತಾ “ಇಲ್ಲ ಸರ್ ಈ ಮಾತನ್ನು ಮತ್ತೆ ಹೇಳೋದು ಬೇಡ ಇದು ನಮ್ಮೊಳಗಡೆನೇ ಇರ್ಲಿ ಅನ್ನೋತರ ಮಂಜು ಅವರ ಮಾತು ಇತ್ತು” ಎಂದು ಹೇಳುತ್ತಾರೆ. ಆಗ ಸುದೀಪ್ ಮಂಜು ಅವರಿಗೆ ಒಂದು ಮಾತು ಹೇಳ್ತಾರೆ. “ನಾನು ಹಿಂಗಂದೆ ಅಂತ ಕೇಳ್ಬೇಡ ಅಲ್ಲ, ನಾನಿದಿನಿ ಕೇಳು ಅನ್ಬೇಕು” ಎನ್ನುತ್ತಾರೆ.