Latest Kannada Nation & World
ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಅಜಯ್ ದೇವ್‌ಗನ್ ಅಭಿನಯದ ಸಿನಿಮಾ ‘ಸಿಂಗಂ ಅಗೇನ್’; ಈ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಿ

ತಾರಾಗಣ
ಅಜಯ್ ದೇವ್‌ಗನ್, ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಜಾಕಿ ಶ್ರಾಫ್, ಕರೀನಾ ಕಪೂರ್ ಹೀಗೆ ಸಾಕಷ್ಟು ಕಲಾವಿದರು ಮುನ್ನಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರೂ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಸಿಂಗಂ ಅಗೇನ್ ಸಹ ಒಂದಾಗಿತ್ತು. ಈ ಸಿನಿಮಾವನ್ನು ಇನ್ನೂ ವೀಕ್ಷಿಸದವರು ಈಗ ಒಟಿಟಿಯಲ್ಲಿ ನೋಡಬಹುದು. ತೆರೆಯ ಮೇಲೆ ವಿಭಿನ್ನ ಪಾತ್ರಗಳನ್ನು ಮಾಡಲು ಸದಾ ಹಂಬಲಿಸುವ ವ್ಯಕ್ತಿ ನಾನು. ಸಿಂಗಂ ಎಗೇನ್‌ನಲ್ಲಿ ಪೊಲೀಸರ ಪ್ರಬಲ ಶತ್ರುವಾಗಿ ನಟಿಸುವುದು ನನಗೆ ದೊರಕಿರುವ ರೋಮಾಂಚಕ ಅವಕಾಶವಾಗಿದೆ ಎಂದು ಅರ್ಜುನ್ ಕಪೂರ್ ಹೇಳಿದ್ದರು. ಅವರು ಇಷ್ಟಪಟ್ಟು ಈ ಸಿನಿಮಾದಲ್ಲಿ ಅಭಿನಯಿಸಿದ್ದರು.