Latest Kannada Nation & World
ಹೊತ್ತಿ ಉರಿದ ದೇವರ ಸಿನಿಮಾ ಜ್ಯೂನಿಯರ್ ಎನ್‌ಟಿಆರ್ ಕಟೌಟ್; ಪಟಾಕಿ ಸಿಡಿಸುವಾಗ ಅಭಿಮಾನಿಗಳಿಂದ ಆದ ಎಡವಟ್ಟೇ ಕಾರಣ

ಎನ್‌ಟಿಆರ್ ಕಟೌಟ್‌ಗೆ ರಕ್ತದ ಅಭಿಷೇಕ
ದೇವರ, ಆರ್‌ಆರ್‌ಆರ್ ಸಿನಿಮಾ ನಂತರ ಬಿಡುಗಡೆ ಆಗುತ್ತಿರುವ ಜ್ಯೂನಿಯರ್ ಎನ್‌ಟಿಆರ್ ಸಿನಿಮಾ. ಆ ಸಿನಿಮಾ ನಂತರ ತಾರಕ್‌ಗೆ ಅಭಿಮಾನಿ ಬಳಗ ಇನ್ನಷ್ಟು ಹೆಚ್ಚಾಗಿದೆ. ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಲು ಕೆಲವೆಡೆ ಬೃಹತ್ ಕಟೌಟ್‌ಗಳನ್ನು ನಿಲ್ಲಿಸಿ, ಸಿಹಿ ಹಂಚಿ, ಇನ್ನೂ ಕೆಲವೆಡೆ ಊಟದ ವ್ಯವಸ್ಥೆ ಮಾಡಿ ಸಂಭ್ರಮಿಸಿದ್ದಾರೆ. ಅನಂತಪುರ ಥಿಯೇಟರ್ ಒಂದರಲ್ಲಿ 50 ಅಡಿ ಎತ್ತರದ ಎನ್‌ಟಿಆರ್ ಬೃಹತ್ ದೇವರ ಸಿನಿಮಾ ಎನ್‌ಟಿಆರ್ ಲುಕ್ ಕಟ್ ಔಟ್ ಅಳವಡಿಸಲಾಗಿತ್ತು. ಕಟೌಟ್‌ಗೆ ತಾರಕ್ ಅಭಿಮಾನಿಗಳು ಹಾಲಿನ ಅಭಿಷೇಕ ಮಾತ್ರವಲ್ಲದೆ ರಕ್ತಾಭಿಷೇಕ ಕೂಡಾ ಮಾಡಿದ್ದಾರೆ. ದೇವರ ಸಿನಿಮಾ ಸೂಪರ್ ಹಿಟ್ ಆಗಬೇಕೆಂದು ಪ್ರಾರ್ಥಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಕಟೌಟ್ ಮೇಲೆ ಹತ್ತಿ ರಕ್ತದ ಅಭಿಷೇಕ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.