Latest Kannada Nation & World
ಎಸ್‌ಆರ್‌ಎಚ್ ಪರ ಐಪಿಎಲ್ ಪದಾರ್ಪಣೆ ಮಾಡಿದ ಅನಿಕೇತ್ ವರ್ಮಾ ಯಾರು? ಪವರ್‌ಫುಲ್ ತಂಡದಲ್ಲಿ ಪವರ್ ಹಿಟ್ಟರ್

ಐಪಿಎಲ್ 18ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಆರಂಭ ಪಡೆದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅಬ್ಬರದ ಆಟ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಯುವ ಆಟಗಾರನೊಬ್ಬ ಪದಾರ್ಪಣೆ ಮಾಡಿದ್ದಾರೆ. ಅವರೇ ಅನಿಕೇತ್ ವರ್ಮಾ (Aniket Verma). ಉತ್ತರ ಪ್ರದೇಶದ ಝಾನ್ಸಿಯಲ್ಲಿ ಜನಿಸಿದ ಅನಿಕೇತ್ ವರ್ಮಾ, ಭಾರತೀಯ ಕ್ರಿಕೆಟ್‌ನಲ್ಲಿ ಭರವಸೆಯ ಬಲಗೈ ಬ್ಯಾಟರ್. ಅಷ್ಟೇ ಅಲ್ಲ ಬಲಗೈ ಮಧ್ಯಮ ವೇಗದ ಬೌಲರ್. 2002ರ ಫೆಬ್ರುವರಿ 5ರಂದು ಜನಿಸಿದ ಅನಿಕೇತ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದಲೇ ಗುರುತಿಸಿಕೊಂಡಿದ್ದಾರೆ.