Latest Kannada Nation & World
ಎಲ್ಲ ಪ್ರೇಮಿಗಳಿಗೂ ಪ್ರೀತಿ ಹಬ್ಬದ ಶುಭಾಶಯ ಕೋರಿದ ಜೀ ಕನ್ನಡ ವಾಹಿನಿ; ಚೇತನ್ ಸೊಲಗಿ ಸಾಹಿತ್ಯದಲ್ಲಿ ಮೂಡಿ ಬಂತು ಹೊಸ ಹಾಡು

ಜೀ ಕನ್ನಡ ವಾಹಿನಿಯು ಪ್ರೇಮಿಗಳ ದಿನಾಚರಣೆಗೆ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದೆ. ಚೇತನ್ ಸೊಲಗಿ ಸಾಹಿತ್ಯದಲ್ಲಿ ಮೂಡಿಬಂದ ಹಾಡು ಮಧುರವಾಗಿದೆ. ಸಾದ್ವಿನಿ ಕೊಪ್ಪ, ರಘೋತ್ತಮ್ ರಾಘವೇಂದ್ರ, ಕಾರ್ತಿಕ್ ನಗಲಾಪುರ ಈ ಹಾಡನ್ನು ಹಾಡಿದ್ದಾರೆ. ಕರಣ್ ಅನಂತ್ ಈ ವಿಡಿಯೋ ಸಾಂಗ್ ನಿರ್ದೇಶನ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲ ಧಾರಾವಾಹಿಗಳ ನಾಯಕ, ನಾಯಕಿಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರ ಪ್ರೀತಿಯನ್ನು ಈ ಹಾಡಿನಲ್ಲಿ ಒಟ್ಟುಗೂಡಿಸಲಾಗಿದೆ. ಶಿವು ಹಾಗೂ ಪಾರು ಇಬ್ಬರ ಒಲವಿನ ದೃಶ್ಯಗಳು ಸೊಗಸಾಗಿ ಮೂಡಿ ಬಂದಿದ್ದು ಹಾಡಿನ ತುಂಬೆಲ್ಲ ಭಾವನೆಗಳೇ ತುಂಬಿದೆ. ಪ್ರೀತಿಯೇ ಉಸಿರು, ನೀನದರ ಹೆಸರು ಎಂಬ ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ.