Latest Kannada Nation & World
ಕಿಚ್ಚನ ಪಂಚಾಯ್ತಿಗೆ ಭರಪೂರ್ ರೇಟಿಂಗ್; ಬಿಗ್ ಬಾಸ್ ಕನ್ನಡ 11ರ ಮನೆಯಲ್ಲಿ ನಡೆದ ಕಿತ್ತಾಟಕ್ಕೆ ಸಿಕ್ಕ ಟಿಆರ್ಪಿ ಎಷ್ಟು?-kannada reality show trp bigg boss kannada 11 trp rating out kichcha sudeep weekly episode gets bigg numbers mnk ,ಮನರಂಜನೆ ಸುದ್ದಿ

ಜಗಳ ಕಿತ್ತಾಟ; ವೀಕ್ಷಕರಿಗೆ ಕಿರಿಕಿರಿ
ಕಳೆದ ಬಿಗ್ಬಾಸ್ ಸೀಸನ್ 10ರಲ್ಲಿ ಅತಿ ಹೆಚ್ಚು ಗಲಾಟೆ ನಡೆದರೂ, ಅದು ನೋಡುಗರಿಗೆ ಒಂದು ರೀತಿ ಮಜ ಎನಿಸಿತ್ತು. ಆ ಜಗಳದಲ್ಲಿ ಅಷ್ಟೇ ಗಟ್ಟಿಯಾದ ಕಾರಣಗಳಿದ್ದವು. ಆದರೆ, ಈ ಸಲದ ಸೀಸನ್ 11ರಲ್ಲಿ ಬೇಕು ಅಂತಲೇ ಜಗಳಗಳು ನಡೆಯುತ್ತಿವೆ ಎಂಬುದು ವೀಕ್ಷಕರ ಅಭಿಪ್ರಾಯ. ಸುಖಾ ಸುಮ್ಮನೆ ಕಾಲು ಕೆರದುಕೊಂಡು ಜಗಳ ಆಡುವ ಮೂಲಕ ವೀಕ್ಷಕರಿಗೆ ಕಿರಿಕಿರಿ ಅನಿಸಿದ್ದಾರೆ ಜಗದೀಶ್. ಜಗದೀಶ್ ಹಾವಳಿಗೆ ಉಳಿದ ಮನೆಮಂದಿಯೂ ರೋಸಿ ಹೋಗಿದ್ದಾರೆ. ಕೈ ಕೈ ಮಿಲಾಯಿಸುವ ಹಂತಕ್ಕೂ ಬಂದು ನಿಂತಿದೆ. ವೀಕ್ಷಕ ವಲಯದಿಂದಲೂ ಈ ಸಲದ ಶೋ ಬಗ್ಗೆ ಅಸಮಾಧಾನದ ಹೊಗೆಯಾಡುತ್ತಿದೆ.