Latest Kannada Nation & World
ಕೆಲಸ ಕಳೆದುಕೊಂಡ್ರೆ ಅವಳ ಶೋಕಿ ಕಡಿಮೆ ಆಗುತ್ತೆ, ತಾಂಡವ್-ಶ್ರೇಷ್ಠಾ ಕುತಂತ್ರದಿಂದ ಉದ್ಯೋಗ ಕಳೆದುಕೊಳ್ತಾಳ ಭಾಗ್ಯಾ? ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾ ಕೆಲಸಕ್ಕೆ ಕುತ್ತು ತರಲು ಶ್ರೇಷ್ಠಾ-ತಾಂಡವ್ ಪ್ಲ್ಯಾನ್
ಫ್ರೆಶ್ ಆಗಿ ಬಂದು ಊಟಕ್ಕೆ ಕೂರುತ್ತಾನೆ. ಶ್ರೇಷ್ಠಾ, ತಾನು ಮಾಡಿದ ನ್ಯೂಡಲ್ಸ್‌ನ್ನು ತಾಂಡವ್ ತಟ್ಟೆಗೆ ಬಡಿಸುತ್ತಾಳೆ. ಅದನ್ನು ನೋಡಿ ತಾಂಡವ್‌ಗೆ ಹಿಂಸೆ ಆಗುತ್ತದೆ, ನೀನು ತೇಗುತ್ತಿದ್ದೀಯ ಏನೋ ತಿಂದು ಬಂದಿದ್ದೀಯ ಎಂದು ಶ್ರೇಷ್ಠಾ ಕೋಪದಿಂದ ಕೇಳುತ್ತಾಳೆ. ತಾಂಡವ್ ನಡೆದ ವಿಚಾರವನ್ನೆಲ್ಲಾ ಶ್ರೇಷ್ಠಾಗೆ ಹೇಳುತ್ತಾನೆ. ಅದನ್ನು ಕೇಳಿ ಶ್ರೇಷ್ಠಾ ಮೊದಲು ಕೋಪಗೊಂಡರೂ, ಭಾಗ್ಯಾ ವಿಚಾರ ಬರುತ್ತಿದ್ದಂತೆ ಸುಮ್ಮನಾಗುತ್ತಾಳೆ. ಅವಳಿಗೆ ಕೆಲಸ ಇರುವುದರಿಂದಲೇ ಇಷ್ಟೆಲ್ಲಾ ಮೆರೆಯುತ್ತಿದ್ದಾಳೆ. ಹೇಗಾದರೂ ಮಾಡಿ ಅವಳು ಕೆಲಸ ಮಾಡುವ ಕಡೆ ಅವಳಿಗೆ ಕೆಟ್ಟ ಹೆಸರು ಬರುವಂತೆ ಮಾಡಬೇಕು, ಅವಳು ಕೆಲಸ ಕಳೆದುಕೊಳ್ಳುವಂತೆ ಮಾಡಬೇಕು ಎನ್ನುತ್ತಾಳೆ.