Latest Kannada Nation & World
ಕ್ರೀಡಾ ವಸತಿ ಶಾಲೆ, ನಿಲಯಗಳ ಪ್ರವೇಶಕ್ಕೆ ತರಬೇತಿ ಶಿಬಿರ ಆರಂಭ; ದಿನಾಂಕ, ಆಯ್ಕೆಯ ನಿಯಮಗಳ ಮಾಹಿತಿ ಇಲ್ಲಿದೆ

ಪ್ರಖ್ಯಾತ ಕ್ರೀಡಾಪಟುಗಳಾದ ಪ್ರಮೀಳಾ ಅಯ್ಯಪ್ಪ, ಜಿಜಿ ಶೋಭಾ, ಹೆಚ್ಎಂ ಜ್ಯೋತಿ, ಎಸ್ಡಿ ಈಶನ್, ಬಾಂಧವ್ಯ ಶಶಿಕಾಂತ್, ಮಲಪ್ರಭಾ ಜಾಧನ್, ಮೋಹಿತ್ ಹೆಚ್ಎಸ್ ,ಪ್ರಿಯಾಂಕ ಪಿ ಸೇರಿದಂತೆ ನೂರಾರು ಕ್ರೀಡಾಪಟುಗಳು ಕ್ರೀಡಾ ವಸತಿ ಶಾಲೆ ಮತ್ತು ನಿಲಯಗಳಲ್ಲೇ ತರಬೇತಿ ಪಡೆದವರು. ಅಲ್ಲದೇ, ಇಲ್ಲಿ ತರಬೇತಿ ಪಡೆದ ನೂರಾರು ಕ್ರೀಡಾಪಟುಗಳು ತಮ್ಮ ಕ್ರೀಡಾ ಸಾಧನೆಯ ಹಿನ್ನೆಲೆಯಲ್ಲಿ ಪೊಲೀಸ್, ರೈಲ್ವೆ ಅರಣ್ಯ, ಆದಾಯ ತೆರಿಗೆ ಇಲಾಖೆ, ಮಹಾಲೇಖಪಾಲರ ಕಚೇರಿ, ಬ್ಯಾಂಕ್‌ಗಳು ಸೇರಿದಂತೆ ಪ್ರತಿಷ್ಠಿತ ಉದ್ಯೋಗಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.