Latest Kannada Nation & World
ಚಾಂಪಿಯನ್ಸ್ ಟ್ರೋಫಿ ಆಯ್ತು, ಈಗ ಮುಂದಿನ ಐಸಿಸಿ ಟೂರ್ನಿ ಯಾವಾಗ, ಎಲ್ಲಿ? 2031ರ ತನಕ ದೊಡ್ಡ ಕಾರ್ಯಕ್ರಮಗಳ ಪಟ್ಟಿ ಇದು!

ದುಬೈನಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಭಾರತ ತಂಡ ಏಕದಿನ ಸ್ವರೂಪದಲ್ಲಿ ಐಸಿಸಿ ಟ್ರೋಫಿ ಬರ ಕೊನೆಗೊಳಿಸಿದೆ. ಇದು ಭಾರತದ ಮೂರನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯಾಗಿದ್ದು, ಆಸ್ಟ್ರೇಲಿಯಾದ 2 ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಮೀರಿಸಿದೆ. ಕಳೆದ ಜೂನ್‌ನಲ್ಲಿ ಟಿ20 ವಿಶ್ವಕಪ್ ಜಯಿಸಿದ್ದ ಮೆನ್ ಇನ್ ಬ್ಲೂ ಸತತ ಎರಡನೇ ಪ್ರಶಸ್ತಿಗೆ ಮುತ್ತಿಕ್ಕಿತು. ಇದೀಗ ಭಾರತದ ಖಾತೆಗೆ 2 ಏಕದಿನ ವಿಶ್ವಕಪ್ ಪ್ರಶಸ್ತಿ, 2 ಟಿ20 ವಿಶ್ವಕಪ್, 3 ಚಾಂಪಿಯನ್ಸ್ ಟ್ರೋಫಿಗಳು ಸೇರಿವೆ. ಮುಂದಿನ ಐಸಿಸಿ ಟೂರ್ನಿ ಯಾವಾಗ, ಎಲ್ಲಿ? 2031ರ ತನಕ ಯಾವ ಯಾವ ಐಸಿಸಿ ಟೂರ್ನಿಗಳು ನಡೆಯಲಿವೆ? ಜಾಗತಿಕ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಮುಂದಿನ ದೊಡ್ಡ ಕಾರ್ಯಕ್ರಮಗಳ ನೋಟ ಇಲ್ಲಿದೆ.