Latest Kannada Nation & World
ಛೀ ಇದೂ ಒಂದು ಡ್ಯಾನ್ಸಾ? ಭಾಗ್ಯಾಗೆ ಎಲ್ಲರ ಮುಂದೆ ಅವಮಾನ ಮಾಡಿದ ಶಿಕ್ಷಕಿ, ಖುಷಿಯಾದ ತಾಂಡವ್ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾಗೆ ಎಲ್ಲರ ಮುಂದೆ ಅವಮಾನ
ಶಿಕ್ಷಕಿ ಸೂಚನೆಯಂತೆ ಭಾಗ್ಯಾ ಡ್ಯಾನ್ಸ್ ಮಾಡಲು ಆರಂಭಿಸುತ್ತಾಳೆ. ಆದರೆ ಶಿಕ್ಷಕಿ, ಬೇಕಂತಲೇ ಡ್ಯಾನ್ಸ್ ನಿಲ್ಲಿಸುವಂತೆ ಹೇಳಿ ಛೀ, ಇದೂ ಒಂದು ಡ್ಯಾನ್ಸಾ ಎಂದು ಹೀಯಾಳಿಸುತ್ತಾಳೆ. ಶಿಕ್ಷಕಿ, ಭಾಗ್ಯಾಗೆ ಬೈಯ್ಯುವುದನ್ನು ನೋಡಿದ ಬೇರೆ ಸ್ಟೂಡೆಂಟ್‌ಗಳು ಆಶ್ಚರ್ಯಗೊಳ್ಳುತ್ತಾರೆ. ಆದರೆ ತಾಂಡವ್ ಹಾಗೂ ಶ್ರೇಷ್ಠಾಗೆ ಮಾತ್ರ ಭಾಗ್ಯಾಗೆ ಅವಮಾನವಾಗುತ್ತಿರುವುದು ಖುಷಿಯಾಗುತ್ತದೆ. ಭಾಗ್ಯಾಗೆ ಬೈಯ್ಯುವುದೂ ಅಲ್ಲದೆ ಆಕೆಗೆ ಡ್ಯಾನ್ಸ್ ಕಲಿಸಿದ ಗುರುಗಳನ್ನೂ ಆ ಶಿಕ್ಷಕಿ ಹೀಯಾಳಿಸುತ್ತಾಳೆ. ಇದರಿಂದ ಭಾಗ್ಯಾ ಕೋಪಗೊಳ್ಳುತ್ತಾಳೆ. ಆದರೆ ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಶಿಕ್ಷಕಿ, ಇಂತವಳು ನನ್ನ ಬಳಿ ಸ್ಟೂಡೆಂಟ್ ಆಗಿರುವುದು ನನಗೆ ಇಷ್ಟವಿಲ್ಲ ಎಂದು ಭಾಗ್ಯಾಳನ್ನು ಡ್ಯಾನ್ಸ್ ಕ್ಲಾಸ್‌ನಿಂದ ಹೊರ ಹಾಕುತ್ತಾಳೆ.