Latest Kannada Nation & World
ಜೋಸ್ ಬಟ್ಲರ್ ನಂತರ ಇಂಗ್ಲೆಂಡ್ ತಂಡದ ಮುಂದಿನ ನಾಯಕ ಯಾರಾಗಬಹುದು; ರೇಸ್ನಲ್ಲಿದ್ದಾರೆ ಈ ಮೂವರು

1. ಹ್ಯಾರಿ ಬ್ರೂಕ್
ಇಂಗ್ಲೆಂಡ್ ತಂಡವನ್ನು ಕೆಲವು ತಿಂಗಳ ಹಿಂದೆ ಹ್ಯಾರಿ ಬ್ರೂಕ್ (Harry Brook) ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡದ ಜವಾಬ್ದಾರಿ ಹೊತ್ತುಕೊಂಡಿದ್ದರು. ಜತೆಗೆ ಯಶಸ್ವಿಯೂ ಆಗಿದ್ದರು. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್, 3-2 ಅಂತರದಿಂದ ಸೋಲಿಸಿತ್ತು. ಅಲ್ಲದೆ, ಬ್ರೂಕ್ ನಾಯಕತ್ವದೊಂದಿಗೆ ಬ್ಯಾಟಿಂಗ್ನಲ್ಲೂ ಭರ್ಜರಿ ಯಶಸ್ಸು ಕಂಡಿದ್ದರು. ಆದರೆ, ಪ್ರಸ್ತುತ ತವರಿನ ಹೊರಗಿನ ಮೈದಾನಗಳಲ್ಲಿ ರನ್ ಗಳಿಸುತ್ತಿಲ್ಲ. ಯುವ ಆಟಗಾರನೂ ಆಗಿರುವ ಕಾರಣ ಭವಿಷ್ಯದ ದೃಷ್ಟಿಯಿಂದ ವೈಟ್ ಬಾಲ್ ನಾಯಕತ್ವಕ್ಕೆ ಹ್ಯಾರಿ ಬ್ರೂಕ್ ಸೂಕ್ತ ಎನ್ನಬಹುದು.