Latest Kannada Nation & World
ಯಾರಲ್ಲೂ ಈ ವಿಚಾರ ಬಾಯಿಬಿಡಬೇಡಿ ಎಂದು ಜಾಹ್ನವಿಗೆ ಆಸ್ಪತ್ರೆಯಲ್ಲಿ ಎಚ್ಚರಿಕೆ ನೀಡಿದ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ

ಬಾಯಿಮುಚ್ಚಿಕೊಂಡಿರು ಎಂದ ಜಯಂತ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಾಹ್ನವಿಗೆ ಮನೆಯಿಂದ ಅಪ್ಪ ಕರೆ ಮಾಡಿದ್ದಾರೆ. ಆದರೆ ಜಯಂತ್ ಅವರ ಬಳಿ ವಿಷಯ ತಿಳಿಸಿಲ್ಲ. ಫೋನ್ ಕರೆ ಸ್ವೀಕರಿಸಿ, ಜಾಹ್ನವಿ ಆರಾಮವಾಗಿದ್ದಾಳೆ. ಇನ್ನೇನು ಮನೆಗೆ ಬರುತ್ತೇವೆ ಎಂದು ಹೇಳಿದ್ದಾನೆ, ಆದರೆ ಶ್ರೀನಿವಾಸ್, ಮಗಳ ಬಳಿ ಮಾತನಾಡಬೇಕು ಎಂದಾಗ, ಜಾಹ್ನವಿಗೆ ಫೋನ್ ಕೊಡುವ ಮೊದಲು, ನೀನು ಯಾವುದೇ ವಿಚಾರವನ್ನು ಅವರ ಬಳಿ ಹೇಳಬಾರದು, ಸಮಸ್ಯೆಯನ್ನು ನಾವೇ ಸರಿಪಡಿಸೋಣ, ಹಾಗೇನಾದರೂ ಹೇಳಿದರೆ ಅದರ ಪರಿಣಾಮ ಚೆನ್ನಾಗಿರುವುದಿಲ್ಲ, ಅವರ ಸಂತೋಷವೆಲ್ಲ ಹಾಳಾಗುತ್ತದೆ. ಹಾಗಾಗದಂತೆ ನೋಡಿಕೋ ಎಂದು ಎಚ್ಚರಿಕೆ ಕೊಡುತ್ತಾನೆ. ಅದಕ್ಕೆ ಜಾಹ್ನವಿ ಕೂಡ, ತಂದೆಯ ಬಳಿ ಏನೂ ಹೇಳದೆ ಮುಚ್ಚಿಡುತ್ತಾಳೆ.