Astrology
ನವರಾತ್ರಿ ಹಬ್ಬ ಆಚರಣೆಗೂ ಮೊದಲೇ ಪುರಾಣ ಕಥೆಗಳಲ್ಲಿರುವ ನವದುರ್ಗೆಯರ ಬಗ್ಗೆ ಸ್ವಲ್ಪ ತಿಳಿದುಕೊಂಡಿರಿ

ಭಾರತದ ಉದ್ದಗಲಕ್ಕೂ ನವರಾತ್ರಿ ಆಚರಣೆಗೆ ಸಿದ್ಧತೆ ನಡೆದಿದೆ. ಈ ಸಲ ಅಕ್ಟೋಬರ್ 3 ರಿಂದ 12 ತನಕ ನವರಾತ್ರಿ ಉತ್ಸವ ನಡೆಯಲಿದೆ. ಪ್ರಪಂಚದಾದ್ಯಂತದ ಹಿಂದೂಗಳು ಒಂಬತ್ತು ದಿನಗಳ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಪ್ರತಿ ವರ್ಷ ನಾಲ್ಕು ನವರಾತ್ರಿಗಳನ್ನು ಆಚರಿಸುತ್ತಾರೆ. ನವರಾತ್ರಿ ವೇಳೆ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗಿದೆ. ಚಂದ್ರಘಂಟಾ, ಮಾ ಕೂಷ್ಮಾಂಡಾ, ಮಾ ಶೈಲಪುತ್ರಿ, ಮಾ ಬ್ರಹ್ಮಚಾರಿಣಿ, ಮಾ ಸ್ಕಂದಮಾತಾ, ಮಾ ಕಾತ್ಯಾಯನಿ, ಮಾ ಕಾಳರಾತ್ರಿ, ಮಾ ಮಹಾಗೌರಿ ಮತ್ತು ಮಾ ಸಿದ್ಧಿದಾತ್ರಿ ಅವರ ಒಂಬತ್ತು ಅವತಾರಗಳಲ್ಲಿ ನವರಾತ್ರಿಯಲ್ಲಿ ಪೂಜಿಸಲಾಗುತ್ತದೆ. ಈ ಒಂಬತ್ತು ಅವತಾರಗಳ ಹಿಂದೆಯೂ ಪುರಾಣ ಕಥೆಗಳಿವೆ, ಐತಿಹ್ಯಗಳಿವೆ. ದುರ್ಗಾ ದೇವಿ ಅಥವಾ ಪಾರ್ವತಿ ದೇವಿ ಆಯಾ ಅವತಾರ ಎತ್ತುವುದಕ್ಕೆ ಕಾರಣವೇನು, ಸನ್ನಿವೇಶ ಏನಿತ್ತು ಮತ್ತು ಬೇರೆ ಬೇರೆ ಹೆಸರುಗಳು ದೇವಿಗೆ ಹೇಗೆ ಬಂದವು ಎಂಬುದಕ್ಕೂ ವಿವರಣೆಗಳು ಸಿಗುತ್ತವೆ.