Latest Kannada Nation & World
ಪ್ರೇಮಿಗಳ ದಿನದ ಸಂಭ್ರಮ ಶುರು; ಗುಲಾಬಿ ದಿನದಂದು ಭರ್ಜರಿ ಹೂ ಮಾರಾಟ, ವ್ಯಾಪಾರಿಗಳ ಮಂದಹಾಸ

ಸಾಮಾನ್ಯ ದಿನಗಳಲ್ಲಿ ಕೆಂಪು ಗುಲಾಬಿಗಳು ಪ್ರತಿಯೊಂದಕ್ಕೆ 10 ರೂ.ಗಳಂತೆ ಮಾರಾಟವಾಗುತ್ತವೆ. ಇದೇ ವೇಳೆ ಗುಲಾಬಿ ಮತ್ತು ಬಿಳಿ ಬಣ್ಣದ ಗುಲಾಬಿ ಹೂಗಳಿಗೆ 15 ರೂ. ಇರುತ್ತದೆ. ಆದರೆ ಇಂದು (ಫೆ.7) ಬೇಡಿಕೆ ತುಂಬಾ ಹೆಚ್ಚಿರುವುದರಿಂದ, ಕೆಂಪು ಗುಲಾಬಿಗೆ 30 ರೂ. ಮತ್ತು ಗುಲಾಬಿ ಮತ್ತು ಬಿಳಿ ಗುಲಾಬಿಗಳಿಗೆ 40 ರೂಪಾಯಿಗಳಂತೆ ದರ ನಿಗದಿಪಡಿಸಲಾಗಿದೆ. ಆದರೂ, ವಿಶೇಷ ದಿನದಂದು ಜನರು ಸಂತೋಷದಿಂದ ಅವುಗಳನ್ನು ಖರೀದಿಸುತ್ತಿದ್ದಾರೆ. ಗುಲಾಬಿ ದಿನವು ನಮಗೆ ಯಾವಾಗಲೂ ವಿಶೇಷ, ಎಂದು ಕಳೆದ 23 ವರ್ಷಗಳಿಂದ ಪುಣೆಗ ಎಫ್‌ಸಿ ರಸ್ತೆಯಲ್ಲಿ ಹೂವು ಮಾರಾಟ ನಡೆಸುತ್ತಿರುವ 46 ವರ್ಷದ ವ್ಯಾಪಾರಿ ರವಿರಾಜ್ ಶಿಂಧೆ ಅವರ ಹೇಳಿಕೆಯನ್ನು ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.