Latest Kannada Nation & World
ಭಾರತದಲ್ಲಿ ವಾಹನ ಗುಜರಿ ನೀತಿ ಬದಲಾವಣೆ ಶೀಘ್ರ, 15 ವರ್ಷ ಹಳೆಯ ವಾಹನಗಳಿಗೆ ಬಿಗ್ ರಿಲೀಫ್-automobile news india vehicle scrapping policy may change soon offer relief to 15 year old units pcp ,ರಾಷ್ಟ್ರ-ಜಗತ್ತು ಸುದ್ದಿ
Vehicle Scrapping: ಮೂರು ವರ್ಷಗಳ ಹಿಂದೆ ಪರಿಚಯಿಸಿದ ವಾಹನ ಗುಜರಿ ನೀತಿಯಲ್ಲಿ ಕೇಂದ್ರ ಸರಕಾರವು ಶೀಘ್ರದಲ್ಲಿ ತಿದ್ದುಪಡಿ ತರಲಿದೆ. 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಾಹನಗಳಿಗೆ ಇದರಿಂದ ಬಿಗ್ ರಿಲೀಫ್ ದೊರಕಲಿದೆ. ಹೊಸ ಬದಲಾವಣೆಯಿಂದಾಗಿ, ಫಿಟ್‌ನೆಸ್ ಪರೀಕ್ಷಾ ಕೇಂದ್ರಗಳಲ್ಲಿ ಅನರ್ಹವೆಂದು ಕಂಡುಬಂದ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವೆಂಬ ನಿಯಮದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ವಾಹನವನ್ನು ಗುಜರಿಗೆ ಹಾಕುವಂತೆ ಹೇಳುವ ಬದಲು ವಾಹನ ಹೊರಸೂಸುವ ಮಾಲಿನ್ಯದ ಮಟ್ಟದ ಮೇಲೆ ಗಮನ ಹರಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಹೀಗಾಗಿ, 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಾಹನಗಳಿಗೂ ಜೀವದಾನ ದೊರಕಲಿದೆ.