Latest Kannada Nation & World
ಭಾರತದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಬಾಂಗ್ಲಾದೇಶ; ಅರ್ಷದೀಪ್ ಅಲಭ್ಯ, ಶಮಿಗೆ ಅವಕಾಶ

ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಇಂದು ಅಭಿಯಾನ ಆರಂಭಿಸುತ್ತಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಂಡ ಕಣಕ್ಕಿಳಿಯುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಿಚ್ ಹೊಸದಾಗಿದ್ದು, ಆದ್ಯತೆಯಂತೆ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂತೋ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದ ಆಡುವ ಬಳಗದಿಂದ ಅರ್ಷದೀಪ್ ಸಿಂಗ್ ಅವರನ್ನು ಹೊರಗಿಡಲಾಗಿದೆ. ಮೊಹಮ್ಮದ್ ಶಮಿ ಪ್ರಮುಖ ವೇಗಿಯಾಗಿದ್ದು, ಜಡೇಜಾ ಕೂಡಾ ಸ್ಥಾನ ಪಡೆದಿದ್ದಾರೆ.