Latest Kannada Nation & World
ಮುಂಬೈ vs ಆರ್‌ಸಿಬಿ ಪಂದ್ಯದ ಅಮೋಘ ದೃಶ್ಯ; ವಿರಾಟ್ ಕೊಹ್ಲಿ-ಜಸ್ಪ್ರೀತ್ ಬುಮ್ರಾ ಬ್ರೊಮ್ಯಾನ್ಸ್ ನೋಡಿ ಫ್ಯಾನ್ಸ್ ಪುಳಕ

ವಿಶ್ವದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ವಿಶ್ವದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಪರಸ್ಪರ ಎದುರಾಳಿಗಳಾಗಿ ಆಡುತ್ತಾರೆ ಎಂದರೆ ಅಲ್ಲಿ ರೋಚಕತೆ ಇರಲೇ ಬೇಕು. ನಿನ್ನೆಯಷ್ಟೇ (ಏಪ್ರಿಲ್ 7 ಸೋಮವಾರ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಯ್ತು. ಸುದೀರ್ಘ ಅವಧಿಯ ನಂತರ ಮೈದಾನಕ್ಕಿಳಿದ ಬುಮ್ರಾ, ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿದರು. ಇದು ಅಭಿಮಾನಿಗಳು ಈ ಪಂದ್ಯದಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಕ್ಷಣವಾಗಿತ್ತು.