Latest Kannada Nation & World
ಇನ್ನೂ ದೇಶೀಯ ಕ್ರಿಕೆಟ್ ಆಡದ ಕೇರಳದ ಯುವಕ ಈಗ ಐಪಿಎಲ್ ಸ್ಟಾರ್; ಸಿಎಸ್‌ಕೆ ಮೂವರು ಬ್ಯಾಟರ್‌ಗಳ ವಿಕೆಟ್ ಕಿತ್ತ ವಿಘ್ನೇಶ್ ಪುತ್ತೂರ್ ಯಾರು?

ಸೀನಿಯರ್ ತಂಡದ ಪರ ಆಡಿಲ್ಲ
ಕೇರಳದ ಮಲಪ್ಪುರಂನ ಹುಡುಗನಿಗೆ ಈಗ 24 ವರ್ಷ ವಯಸ್ಸು. ಈತನನ್ನು ಮುಂಬೈ ಇಂಡಿಯನ್ಸ್ ತಂಡವು ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಗೆ ಬಿಡ್ ಮಾಡಿತ್ತು. ಅಚ್ಚರಿ ಎಂದರೆ ಈತ ಇನ್ನೂ ಸೀನಿಯರ್ ಮಟ್ಟದಲ್ಲಿ ತಮ್ಮ ರಾಜ್ಯ ತಂಡವಾದ ಕೇರಳ ಪರ ಆಡಿಲ್ಲ. ಯಾವುದೇ ದೇಶೀಯ ಕ್ರಿಕೆಟ್‌ನಲ್ಲೂ ಪ್ರತಿನಿಧಿಸಿಲ್ಲ. 11 ವರ್ಷ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಶುರುಮಾಡಿದಾತ ಇದೀಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ರಾಜ್ಯ ತಂಡದಲ್ಲಿ ಆಡದ ಒಬ್ಬ ಪ್ರತಿಭೆ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆಯುವುದೇ ಅಪರೂಪ. ಆ ಅವಕಾಶ ಪಡೆದು, ಆಡುವ ಬಳಗದಲ್ಲಿ ಸ್ಥಾನ ಪಡೆದು ಪ್ರಬಲ ಬ್ಯಾಟರ್‌ಗಳ ವಿಕೆಟ್ ಪಡೆದಿದ್ದಾನೆ ಎಂದರೆ, ಈತನ ಪ್ರತಿಭೆ ಅಸಮಾನ್ಯ ಎಂಬುದು ಸ್ಪಷ್ಟವಾಗುತ್ತದೆ.