Latest Kannada Nation & World
ಯಾರಿದು ಡಾಕ್ಟರ್ ಜೈ ಭಟ್ಟಾಚಾರ್ಯ? ಲಾಕ್‌ಡೌನ್ ಟೀಕಿಸಿದ ಭಾರತೀಯ ಮೂಲದ ವ್ಯಕ್ತಿಗೆ ಆರೋಗ್ಯ ಸಂಸ್ಥೆಯ ಜವಾಬ್ದಾರಿ ನೀಡಿದ ಡೊನಾಲ್ಡ್ ಟ್ರಂಪ್

Who is Jay Bhattacharya?: ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಮೂಲದ ಜೈ ಭಟ್ಟಾಚಾರ್ಯ ಅವರನ್ನು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ನೂತನ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಅಮೆರಿಕ ಸರಕಾರದಲ್ಲಿ ಭಾರತೀಯರ ಪ್ರಾಬಲ್ಯ ಇನ್ನಷ್ಟು ಹೆಚ್ಚಾಗಿದೆ. ವಿಶೇಷವೆಂದರೆ, ಈ ಜೈ ಭಟ್ಟಾಚಾರ್ಯ ಅವರು ಹಿಂದೊಮ್ಮೆ ಅಮೆರಿಕದಲ್ಲಿ ಕೈಗೊಂಡ ಕೋವಿಡ್ ಉಪಕ್ರಮಗಳನ್ನು ಟೀಕಿಸಿದ್ದರು. ಇವರು ಡೊನಾಲ್ಡ್ ಟ್ರಂಪ್ ಆಪ್ತರೂ ಹೌದು. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ನೀತಿಗಳನ್ನು ಟೀಕಿಸಿ ಗಮನ ಸೆಳೆದಿದ್ದ ಇವರಿಗೆ ಇದೀಗ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮುಖ ಹುದ್ದೆ ನೀಡಿದ್ದಾರೆ.