Astrology
ರಾಮ ನವಮಿ ಯಾವಾಗ? ಸರಿಯಾದ ದಿನಾಂಕ, ಶುಭ ಮುಹೂರ್ತ, ಆಚರಣೆಯ ವಿವರ ಇಲ್ಲಿದೆ

ರಾಮ ನವಮಿ 2025 ಆಚರಣೆ
ರಾಮನ ಜನ್ಮಸ್ಥಳವಾದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ನವಮಿ ಆಚರಣೆಗಳು ಪ್ರಾರಂಭವಾಗುತ್ತವೆ. ನಂತರ ದೇಶದ ಇತರ ಭಾಗಗಳಲ್ಲಿ ಆಚರಿಸಲಾಗುತ್ತದೆ. ರಾಮನ ಭಕ್ತರು ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುತ್ತಾರೆ. ಇತರೆ ಭಕ್ತರು ತಮ್ಮ ಮನೆ, ಕೆರೆ, ನದಿಗಳಲ್ಲಿ ಸ್ನಾನ ಮಾಡುತ್ತಾರೆ. ನಂತರ ಕೆಲವರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಉಪವಾಸವನ್ನು ಆಚರಿಸುತ್ತಾರೆ. ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮ ವಿಗ್ರಹಗಳೊಂದಿಗೆ ಬೀದಿಗಳಲ್ಲಿ ದೊಡ್ಡ ಮೆರವಣಿಗೆಗಳನ್ನು ನಡೆಸುತ್ತಾರೆ.