Latest Kannada Nation & World
ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ಆರಂಭ; ಬೃಹತ್ ಮೊತ್ತ ಚೇಸಿಂಗ್ ವೇಳೆ 44 ರನ್‌ಗಳಿಂದ ಸೋತ ರಾಜಸ್ಥಾನ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್, ಇಶಾನ್ ಕಿಶನ್ ಚೊಚ್ಚಲ ಐಪಿಎಲ್ ಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು ದಾಖಲೆಯ 286 ರನ್ ಗಳಿಸಿತು. ಇದು ಐಪಿಎಲ್‌ನ ಎರಡನೇ ಗರಿಷ್ಠ ಮೊತ್ತ. ಕಳೆದ ಆವೃತ್ತಿಯಲ್ಲಿ ಇದೇ ಎಸ್‌ಆರ್‌ಎಚ್ ತಂಡವು 287 ರನ್ ಗಳಿಸಿರುವುದು ಐಪಿಎಲ್ ಇತಿಹಾಸದಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ. ಇದೀಗ ಎರಡನೇ ಸ್ಥಾನದಲ್ಲೂ ಹೈದರಾಬಾದ್ ತಂಡವಿದೆ. ಬೃಹತ್ ಮೊತ್ತ ಚೇಸಿಂಗ್ ಮಾಡಿದ ರಾಜಸ್ಥಾನ್, ದೊಡ್ಡ ಮೊತ್ತ ಚೇಸ್ ಮಾಡಲು ಶತಾಯ ಗತಾಯ ಪ್ರಯತ್ನ ಮಾಡಿತು. ಅಂತಿಮವಾಗಿ 242 ರನ್ ಗಳಿಸಿ ತಲೆಬಾಗಿತು.