Latest Kannada Nation & World
ಹೀಗಾಡಿದ್ರೆ ಭಾರತ ಅಲ್ಲ, ಬಾಂಗ್ಲಾದೇಶ ವಿರುದ್ಧವೂ ಗೆಲ್ಲಲ್ಲ; ಬಾಬರ್ ಆಟಕ್ಕೆ ಫ್ಯಾನ್ಸ್ ಟೀಕೆ; ತಂಡಕ್ಕಾಗಿ ಆಡಿ ಎಂದ ಚೇತೇಶ್ವರ ಪೂಜಾರ

ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿಯೇ ಆತಿಥೇಯ ಪಾಕಿಸ್ತಾನ ತಂಡ ಮುಖಭಂಗಕ್ಕೆ ಒಳಗಾಯ್ತು. ತವರಿನಲ್ಲಿ ಅಪರೂಪದಲ್ಲಿ ಅಪರೂಪವೆಂಬಂತೆ ಐಸಿಸಿ ಟೂರ್ನಿ ನಡೆಯುತ್ತಿದ್ದರೂ, ತಂಡವನ್ನು ಬೆಂಬಲಿಸಲು ತವರಿನ ಅಭಿಮಾನಿಗಳ ಸಂಖ್ಯೆ ಭಾರಿ ಕಡಿಮೆ ಇತ್ತು. ಪಂದ್ಯದಲ್ಲಿ ಪಾಕ್ ಗೆಲ್ಲುತ್ತೆ ಎಂದು ಭಾವಿಸಿದ್ದ ಅಭಿಮಾನಿಗಳಿಗೂ ಭಾರಿ ನಿರಾಶೆ ಎದುರಾಯ್ತು. ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳ ಹೀನಾಯ ಸೋಲಿನೊಂದಿಗೆ ತಂಡದ ಕಳಪೆ ಅಭಿಯಾನ ಶುರುವಾಯ್ತು. ಅಗ್ರ ಕ್ರಮಾಂಕದ ನಿಧಾನಗತಿಯ ಆರಂಭ, ಬೌಲಿಂಗ್ ಆಯ್ಕೆಯಲ್ಲಿ ಗೊಂದಲ, ಕಳಪೆ ಫೀಲ್ಡಿಂಗ್ ಇವೆಲ್ಲವೂ ಹಾಲಿ ಚಾಂಪಿಯನ್ಸ್ ತವರು ನೆಲದಲ್ಲಿಯೇ ಹೀನಾಯ ಸೋಲಿಗೆ ಮುನ್ನುಡಿ ಬರೆಯಿತು.