Latest Kannada Nation & World
700 ಅಡಿ ಬೋರ್ವೇಲ್ನಲ್ಲಿ ಸಿಲುಕಿ 10 ದಿನ ಕಾರ್ಯಾಚರಣೆ ನಂತರ ಬದುಕುಳಿದ 3 ವರ್ಷದ ಮಗು ಕೆಲವೇ ಗಂಟೆಯಲ್ಲೇ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿತು

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗಳು ವೈದ್ಯಕೀಯ ತಂಡಗಳು ತಕ್ಷಣ ತಲುಪಿದವು ಮತ್ತು ಅವಳನ್ನು ರಕ್ಷಿಸುವ ಪ್ರಯತ್ನಗಳು ನಡೆದವು. ಪೈಪ್ ಮೂಲಕ ಬಾಲಕಿಗೆ ಆಮ್ಲಜನಕವನ್ನು ಪೂರೈಸಲಾಯಿತು ಮತ್ತು ಅವಳನ್ನು ಹೊರ ತರುವ ಆರಂಭಿಕ ಪ್ರಯತ್ನಗಳು ವಿಫಲವಾದ ನಂತರ, ರಕ್ಷಣಾ ತಂಡಗಳು ಭಿನ್ನ ಜಾಗದ ಮೂಲಕ ಭೂಮಿ ಅಗೆಯಲು ಪ್ರಾರಂಭಿಸಿದವು. ಆದರೆ ಅವರು ತೋಡಿದ ಸುರಂಗ ದಾರಿ ತಪ್ಪಿತು. ಅಲ್ಲದೇ ಬೋರ್ವೆಲ್ ಕೂಡ ವಾಲಿದ್ದರಿಂದ ಆಕೆಯನ್ನು ಹೊರ ತರುವುದು ಕಷ್ಟವಾಯಿತು. ಅಂತಿಮವಾಗಿ, ರಕ್ಷಣಾ ತಂಡಗಳಿಗೆ ಸಹಾಯ ಮಾಡಲು ದೆಹಲಿ ಮತ್ತು ಜೈಪುರ ಮೆಟ್ರೋದಿಂದ ತಜ್ಞರನ್ನು ಕರೆಸಲಾಯಿತು.ಆರಂಭದಲ್ಲಿ, ಸುರಂಗಕ್ಕೆ 8-ಅಡಿ ಅಗಲದ ಅಗತ್ಯವಿದೆ ಎಂದು ಅಂದಾಜಿಸಿದರೂ ನಂತರ ಕಾರ್ಯಾಚರಣೆಯನ್ನು ಸುಲಭಗೊಳಿಸಲು 12 ಅಡಿಗಳವರೆಗೂ ಅದ್ನು ವಿಸ್ತರಿಸಲಾಯಿತು. ಹತ್ತು ದಿನದ ಅಂತರದಲ್ಲಿ ಐದು ವಿಫಲ ಯತ್ನಗಳ ನಂತರ ಮಗುವನ್ನು ಹೊರ ತೆಗೆಯುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾದವು. ಆದರೆ ಮಗು ಮಾತ್ರ ಬದುಕುಳಿಯಲಿಲ್ಲ.