Latest Kannada Nation & World
ಗಂಡಿನ ಮನೆಯವರ ಕಾಟಕ್ಕೆ ಬೇಸತ್ತ ಅಣ್ಣಯ್ಯ; ಶಿವುಗೆ ಧೈರ್ಯ ತುಂಬ್ತಾಳಾ ಪಾರು

ಶಿವುಗೆ ಗಂಡಿನ ಮನೆಯವರ ಕಾಟ
ಶಿವು ಹೊರಗಡೆ ಬಂದು ಮಾತನಾಡಲು ಆರಂಭಿಸುತ್ತಾನೆ. ಮಾತನಾಡುತ್ತಾ ಇದ್ದಾಗ, ಗಂಡಿನ ಅಪ್ಪ, “ಹಣ ಎಲ್ಲ ಹೊಂದಾಣಿಕೆ ಮಾಡಿದ್ಯಂತೆ ಶಿವು” ಎಂದು ಹೇಳುತ್ತಾರೆ. ಅವರ ಮಾತು ಕೇಳಿದರೆ ತುಂಬಾ ಖುಷಿಯಲ್ಲಿದ್ದಂತೆ ತೋರುತ್ತಿತ್ತು. ಆದರೆ ಅವರ ಮಾತಿನ ವರಸೆ ಬದಲಾಗುತ್ತಾ ಹೋಯಿತು. ಅವರು ಇನ್ನಷ್ಟು ಹಣ ಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಅಂದು ಐದು ಲಕ್ಷ ಹಣಕ್ಕೆ ಒಪ್ಪಿಕೊಂಡಿದ್ದವರು, ಇಂದು ಮಾತು ತಿರುಚುತ್ತಿದ್ದಾರೆ. ಅವರು “ನೀನು ಅಂದು ಹೇಳಿದ್ದು ಮತ್ತು ಒಪ್ಪಿಕೊಂಡದ್ದು ಹತ್ತು ಲಕ್ಷಕ್ಕಲ್ಲವೇ?” ಎಂದು ಕೇಳುತ್ತಾರೆ. ಆ ಮಾತನ್ನು ಕೇಳಿದ ತಕ್ಷಣ ಶಿವುಗೆ ಮೈ ಬೆವರಿಳಿಯುತ್ತದೆ. “ಅಲ್ಲ ನೀವು ಅಂದು ಹೇಳಿದ್ದು ಐದು ಲಕ್ಷಕ್ಕೆ ಎಂದು ಹೇಳುತ್ತಾನೆ” ಆಗ ಅವರ ಮಾತಿನ ವರಸೆ ಇನ್ನಷ್ಟು ಬದಲಾಗುತ್ತದೆ.