Astrology
ಕಿಂದಮ ಋಷಿ ಶಾಪವನ್ನೂ ಮರೆತು ಪತ್ನಿಯೊಂದಿಗೆ ಸೇರಿ ಸಾವನ್ನಪ್ಪಿದ ಪಾಂಡುರಾಜ; ಪಶ್ಚಾತಾಪದಿಂದ ಪತಿಯ ಚಿತೆಗೆ ಹಾರಿದ ಮಾದ್ರಿ-indian mythology pandavas father pandu raja death by curse of sage kindama mahabharata stories sts ,ರಾಶಿ ಭವಿಷ್ಯ ಸುದ್ದಿ

ಪಶ್ಚಾತಾಪ, ದುಃಖದಿಂದ ಪತಿ ಪಾಂಡು ಚಿತೆಗೆ ಹಾರಿ ಸಾವನ್ನಪ್ಪಿದ ಮಾದ್ರಿ
ಪಾಂಡು ರಾಜನು ಮಾಡಿದ ತಪ್ಪನ್ನು ನೆನೆದು ಕುಂತಿ ಮತ್ತು ಮಾದ್ರಿಯರು ಶೋಕದಲ್ಲಿ ಮುಳುಗುತ್ತಾರೆ. ಅಲ್ಲಿಯೇ ಇದ್ದ ಋಷಿಮುನಿಗಳು ಇಬ್ಬರನ್ನು ಸಮಾಧಾನಪಡಿಸುತ್ತಾರೆ. ಕುಂತಿಯು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ತನ್ನ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಾಳೆ. ಆದರೆ ಮಾದ್ರಿಯು ಪಾಂಡುರಾಜನ ಮರಣಕ್ಕೆ ತಾನೇ ಕಾರಣನಾದನೆಂದು ಪಶ್ಚಾತಾಪ ಪಡುತ್ತಾಳೆ. ಯಾರ ಸಮಾಧಾನವು ಮಾದ್ರಿಯ ನೋವನ್ನು ಮರೆಸುವುದಿಲ್ಲ. ಕಡೆಗೆ ಅವಳೊಂದು ದಿಟ್ಟ ನಿರ್ಧಾರಕ್ಕೆ ಬರುತ್ತಾಳೆ. ಆಕೆಯ ಮಕ್ಕಳಾದ ನಕುಲ ಮತ್ತು ಸಹದೇವರನ್ನು ಕರೆದುಕೊಂಡು ಬಂದು ಕುಂತಿಯ ಬಳಿ ನಿಲ್ಲಿಸಿ, ಇನ್ನು ಮುಂದೆ ಇವರಿಬ್ಬರನ್ನು ನಿನ್ನ ಮಕ್ಕಳೆಂದರೆ ಭಾವಿಸು, ಧರ್ಮರಾಯನೇ ನೀನು ಇವರ ಅಣ್ಣನಲ್ಲ ಇವರೆಲ್ಲರನ್ನು ತಂದೆಯಂತೆಯೇ ನೀನು ಸಾಕಬೇಕು. ಹೀಗೆಂದು ಹೇಳಿ ಒಮ್ಮೆಲೇ ಪತಿಯ ಚಿತೆಗೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಈ ವಿಚಾರ ತಿಳಿದ ಹಸ್ತಿನಾವತಿಯ ಜನರು ದುಃಖ ವ್ಯಕ್ತಪಡಿಸುತ್ತಾರೆ.