Astrology
ನರಕ ಚತುರ್ದಶಿ ಯಾವಾಗ ಆರಂಭವಾಗುತ್ತೆ? ಕಥೆ, ಪೂಜೆ ವಿಧಾನ, ಶುಭ ಮುಹೂರ್ತದ ಸಂಪೂರ್ಣ ವಿವರ ಇಲ್ಲಿದೆ

ಹಿಂದೂ ಕ್ಯಾಲೆಂಡರ್ಗಳ ಪ್ರಕಾರ, ದೀಪಾವಳಿಯ ಹಿಂದಿನ ದಿನ ಆಚರಿಸುವ ಪ್ರಮುಖ ಹಬ್ಬವೇ ನರಕ ಚತುರ್ಥಿ. 2024ರಲ್ಲಿ ನರಕ ಚತುರ್ದಶಿ ಯಾವಾಗ ಆರಂಭವಾಗುತ್ತದೆ, ದಿನಾಂಕ, ಸಮಯ ಹಾಗೂ ಆಚರಣೆಯ ಹಿಂದಿನ ಕಥೆಯನ್ನು ನೋಡುವುದಾದರೆ, 2024 ರಲ್ಲಿ ಅಕ್ಟೋಬರ್ 30ರ ಬುಧವಾರದಂದು ನರಕ ಚತುರ್ದಶಿ ಆರಂಭವಾಗುತ್ತದೆ. ಅಂದು ನೀರು ತುಂಬುವ ಹಬ್ಬ, ಆದರೆ ಅಕ್ಟೋಬರ್ 31 ರ ಗುರುವಾರ ನರಕ ಚತುರ್ದಶಿ ಆಚರಣೆ ಇರುತ್ತದೆ. ಅದ್ದರಿಂದ ಆ ದಿನ ಬೆಳಗಿನ ವೇಳೆ ಸೂರ್ಯೋದಯಕ್ಕೆ ಮುನ್ನ ಅಂದರೆ ಬೆಳಗಿನ ಜಾವ 4.30 ರಿಂದ 5.45 ರ ನಡುವೆ ಅಭ್ಯಂಜನ ಸ್ನಾನವನ್ನು ಮಾಡಬೇಕು. ಆ ದಿನದಂದೆ ಧನಲಕ್ಷ್ಮಿ ಪೂಜೆಯನ್ನು ಮಾಡಬೇಕಾಗುತ್ತದೆ. ನವಂಬರ್ 1ರಂದು ಬಲೀಂದ್ರ ಪೂಜೆಯನ್ನು ಮಾಡಬೇಕು. ಬಲಿಪಾಡ್ಯಮಿಯನ್ನು ನವಂಬರ್ ತಿಂಗಳ 2ರಂದು ಆಚರಿಸಬೇಕಾಗುತ್ತದೆ. ಈ ಮೂರು ದಿನ ಮನೆಯ ಮುಂಬಾಗಿಲ ಬಳಿ ದೀಪವನ್ನು ಹಚ್ಚುವುದು ಹೆಚ್ಚಿನ ಲಾಭಕರ. ಅಕ್ಟೋಬರ್ 3ರಂದು ಯಮದ್ವಿತೀಯ ಇರುತ್ತದೆ. ಇದನ್ನು ಸಹ ದೀಪಾವಳಿ ಹಬ್ಬದ ಒಂದು ಭಾಗವೆಂದು ಪರಿಗಣಿಸಬಹುದು.