Latest Kannada Nation & World
ಒಟಿಟಿಯಲ್ಲಿ ಪ್ರಭಾಸ್ ಸಿನಿಮಾಗಳಿಗೆ ಹೆಚ್ಚಿದ ಬೇಡಿಕೆ; ಬಾಲಿವುಡ್ ಚಿತ್ರಗಳಿಗೆ ಪೈಪೋಟಿ ಕೊಟ್ಟು ಜೇಬು ತುಂಬಿಸಿಕೊಳ್ಳುತ್ತಿರುವ ನಿರ್ಮಾಪಕರು

ಬಾಲಿವುಡ್ ಸಿನಿಮಾಗಳ ಜೊತೆ ಪ್ರಭಾಸ್ ಚಿತ್ರಗಳ ಪೈಪೋಟಿ
ಪ್ರಭಾಸ್ ಸಿನಿಮಾಗಳು ಬಾಲಿವುಡ್ ಸ್ಟಾರ್ ಸಿನಿಮಾಗಳ ಜೊತೆ ಪೈಪೋಟಿಗೆ ನಿಂತಿದೆ. ಪ್ರಭಾಸ್ ಅವರ ಸ್ಕ್ರೀನ್ ಪ್ರೆಸೆನ್ಸ್, ಇಮೇಜ್ ಎಲ್ಲವೂ ಉತ್ತರ ಭಾರತದ ಸಿನಿಪ್ರಿಯರನ್ನು ಬಹಳ ಸೆಳೆದಿದೆ. ಸುಮಾರು 28 ವರ್ಷಗಳಿಂದ ಸತತವಾಗಿ ಶಾರುಖ್ ಖಾನ್ ಅವರ ದಿಲ್‌ವಾಲೆ ದುಲ್ಹನಿಯೇ ಲೇಜಾಯೆಂಗೆ ಸಿನಿಮಾ ಪ್ರದರ್ಶನವಾಗುತ್ತಿರುವ ಮರಾಠಾ ಮಂದಿರದಲ್ಲಿ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಪ್ರದರ್ಶನವಾಗುತ್ತಿರುವುದು ಅವರ ಸಿನಿಮಾಗೆ ಇರುವ ಕ್ರೇಜ್ ಎಷ್ಟೆಂದು ತೋರಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿ ಕೂಡಾ ಪ್ರಭಾಸ್ ಸಿನಿಮಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಿದ್ದಾರೆ. ಸಲಾರ್, ಕಲ್ಕಿ ಸಿನಿಮಾಗಳಿಂದ ಒಳ್ಳೆ ಲಾಭ ದೊರೆತಿದೆ. ಕನ್ನಡ, ತಮಿಳು, ಮಲಯಾಳಂನಲ್ಲೂ ಪ್ರಭಾಸ್‌ಗೆ ಹೆಚ್ಚಿನ ಅಭಿಮಾನಿಗಳಿದ್ದು ಒಟಿಟಿಯಲ್ಲಿ ಅವರ ಸಿನಿಮಾಗಳನ್ನು ಹುಡುಕುತ್ತಿದ್ದಾರೆ.