Astrology
ಭಗವಂತ ರಾಮನಿಂದ ನಾವು ಕಲಿಯಬಹುದಾದ ಸಂಬಂಧ, ಅನುಬಂಧದ 5 ಪಾಠಗಳಿವು, ಅನುಸರಿಸಿದರೆ ಬದುಕು ಅದ್ಭುತ

ಭಗವಂತ ರಾಮನಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಎನ್ನುತ್ತಾರೆ. ಜಗತ್ತಿನಲ್ಲಿ ಲಕ್ಷಾಂತರ ಜನರು ಭಕ್ತಿಯಿಂದ ರಾಮನಾಮ ಸ್ಮರಣೆ ಮಾಡುತ್ತಾರೆ. ಸನಾತನ ಧರ್ಮವು ಹಿಂದೂ ಧರ್ಮವೆಂದು ಜನಪ್ರಿಯವಾಗಿದೆ. ಆದರೆ, ಇದು ಧರ್ಮವಲ್ಲ, ಒಂದು ಜೀವನ ವಿಧಾನ. ಭಾರತದ ಮಾಹಾಕಾವ್ಯಗಳು, ಪವಿತ್ರಗ್ರಂಥಗಳು ಜನರಿಗೆ ಮಾನವೀಯತೆಯ ಪಾಠವನ್ನು ಕಲಿಸುತ್ತವೆ. ರಾಮಾಯಣ ಎಂಬ ಗ್ರಂಥದ ಸಾರವನ್ನು ಅನೇಕ ಮಹಾನ್ ಸಂತರು, ವಿದ್ವಾಂಸರು ಜನರಿಗೆ ತಿಳಿಸುತ್ತ ಇರುತ್ತಾರೆ. ಭಗವಂತ ರಾಮನ ಜೀವನದಿಂದ ನಾವೆಲ್ಲರು ಕಲಿಯಬೇಕಾದ, ಅನುಸರಿಸಬೇಕಾದ ಅಂಶಗಳು ಸಾಕಷ್ಟು ಇವೆ. ಸಂಬಂಧ ಅಥವಾ ರಿಲೇಷನ್ ಶಿಪ್ ವಿಚಾರವಾಗಿ ರಾಮನಿಂದ ಏನು ಕಲಿಯಬಹುದು ನೋಡೋಣ.