Latest Kannada Nation & World
ಮದುವೆ ಮಂಟಪ ತಲುಪಿದ ಪೃಥ್ವಿರಾಜ್ ಕೈಯಲ್ಲಿದೆ ತಾಳಿ ಸರ, ಮದನ್, ವಿಜಯಾಂಬಿಕಾಗೆ ಎದುರಾಗಿದೆ ಹಲವು ಕಂಟಕ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 23ರ ಸಂಚಿಕೆಯಲ್ಲಿ ಮದುವೆ ಮಂಟಪಕ್ಕೆ ಹೊರಡಲು ರೆಡಿಯಾಗುವ ಶ್ರಾವಣಿ ಅಜ್ಜನ ಫೋಟೊ ಮುಂದೆ ನಿಂತು ಆಶೀರ್ವಾದ ಪಡೆಯುತ್ತಾಳೆ, ಅಲ್ಲದೇ ಅಜ್ಜ ಹಾಗೂ ತಾಯಿಯನ್ನು ನೆನೆದು ಕಣ್ಣಿರಾಗುತ್ತಾಳೆ. ಅಜ್ಜಿ, ಅಪ್ಪ, ಚಿಕ್ಕಪ್ಪ ಎಲ್ಲರ ಆಶೀರ್ವಾದ ಪಡೆದು ವಿಜಯಾಂಬಿಕಾ ಕಾಲಿಗೆ ಬೀಳಬೇಕು ಎಂದುಕೊಳ್ಳುತ್ತಿರುವಾಗಲೇ ಹೊರಗಿನಿಂದ ‘ಸರ್ ಕಾರ್ ರೆಡಿ ಇದೆ, ಹೊರಡೋಣ‘ ಅಂತ ಧ್ವನಿ ಕೇಳುತ್ತೆ. ಅದನ್ನು ಕೇಳಿ ಸುರೇಂದ್ರ ‘ಅಣ್ಣಾ ಈಗ ಮುಹೂರ್ತ ಚೆನ್ನಾಗಿದೆ, ಈಗಲೇ ಹೊರಡೋಣ‘ ಎಂದು ಅವಸರ ಮಾಡುತ್ತಾನೆ. ವಿಜಯಾಂಬಿಕಾಗೆ ಶ್ರಾವಣಿಗೆ ಆಶೀರ್ವಾದ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ನೋಡಿ ಮದನ್ ಪೇಚಾಡುತ್ತಾನೆ. ಆದರೆ ವಿಜಯಾಂಬಿಕಾಗೆ ಮಾತ್ರ ಎಲ್ಲಿ ಪೃಥ್ವಿರಾಜ್ ಮದುವೆ ಮನೆಗೆ ಬಂದರೆ ತನ್ನ ಬಂಡವಾಳ ಬಯಲಾಗುವುದೋ ಎನ್ನುವ ಭಯ ಕಾಡುತ್ತಿರುತ್ತದೆ.